ಸೋಮವಾರ, ಆಗಸ್ಟ್ 30, 2010

ವಿಜಯಕರ್ನಾಟಕದಲ್ಲಿ ಪ್ರಕಟವಾದ ಮಾಹಿತಿಯನ್ನು ತೆಗೆದುಕೊಂಡು ಕೆಲವು ಪುಸ್ತಕಗಳ ವಿವರವನ್ನು ಸೇರಿಸಿದ್ದೇನೆ.ಪತ್ರಿಕೆಗೆ ಕೃತಜ್ಞ.
ಸಪ್ನಾ ಬುಕ್ ಹೌಸಿಗೆ ಅವರು ಪ್ರಕಟಿಸಿದ ಪುಸ್ತಕಗಳ ವಿವರವನ್ನು ಕೇಳಿದ್ದೇನೆ.

ಸೋಮವಾರ, ಆಗಸ್ಟ್ 23, 2010

ಇಲ್ಲಿದೆ ಪುಸ್ತಕ!
ಇದುವರೆಗೆ ಸಂಪಾದಿಸಿದ ಮಾಹಿತಿಗೆ  ಇಲ್ಲಿ   ಕ್ಲಿಕ್ ಮಾಡಿ.
ಇದುವರೆಗೆ ಸಂಪಾದಿಸಿರುವ  `ಕನ್ನಡ ಪುಸ್ತಕಗಳ ಸಂಕ್ಷಿಪ್ತ ವಿವರ' ಕ್ಕೆ ಇಲ್ಲಿ ಕ್ಲಿಕ್ ಮಾಡಿ: https://docs.google.com/document/edit?id=1qNLJlMWlTeGw1Ci2jJA2tyMXdpDAXXrRpgpckLH5tNE&hl=en#
ಇದೋ! ಇದು ಪ್ರಯಾಣದ ಮೊದಲ ಹೆಜ್ಜೆ!

ಇದುವರೆಗೆ ನಾನು ಸಂಗ್ರಹಿಸಿರುವ ಮಾಹಿತಿಯನ್ನು ಗೂಗಲ್ ಡಾಕ್ಯುಮೆಂಟ್ ನ ಅಡಿಯಲ್ಲಿ ಪಟ್ಟಿ ಮಾಡಿದ್ದೇನೆ. ಅದು ಈ ಲಿಂಕಿನಲ್ಲಿ ಸಿಗುತ್ತದೆ:https://docs.google.com/document/edit?id=1qNLJlMWlTeGw1Ci2jJA2tyMXdpDAXXrRpgpckLH5tNE&hl=en#
ನೋಡುಗರಿಗೆ ಅನುಕೂಲವಾಗುವಂತೆ ಇದನ್ನು ರೂಪಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೇನೆ. ಇದರಲ್ಲಿ ಕೊರತೆಗಳಿಲ್ಲವೆಂದಲ್ಲ.
ಇದು ಆರಂಭವಷ್ಟೇ. ಕ್ರಮೇಣ ಇನ್ನೂ ಒಳ್ಳೆಯ ರೂಪ ಬರಬಹುದು. ನೋಡೋಣ.
ಸದ್ಯ ನಾನು ವಿದೇಶದಲ್ಲಿರುವುದರಿಂದ ಮಾಹಿತಿ ಸಂಗ್ರಹಣೆ ಸುಲಭಸಾಧ್ಯವಲ್ಲ. ಆದರೂ ಸಾಧ್ಯವಾದಷ್ಟನ್ನು ಮಾಡುತ್ತಿದ್ದೇನೆ.ಮನೆಗೆ ತಿರುಗಿ ಬಂದ ನಂತರ ಪ್ರಕಾಶಕರನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿ ಪ್ರಕಟಿಸುತ್ತೇನೆ. ನನಗೆ  ಮಾಹಿತಿ ನೀಡಲು ಅಪೇಕ್ಷಿಸುವವರು ನನ್ನ  ಇ ಮೇಲಿಗೆ  ಕನ್ನಡ ಲಿಪಿಯಲ್ಲಿ ಕಳಿಸಿದರೆ ನಾನು ಪಟ್ಟಿಯಲ್ಲಿ ಸೇರಿಸುತ್ತೇನೆ.

ಸೋಮವಾರ, ಆಗಸ್ಟ್ 16, 2010

ನೀವು ಮಾಡಬಹುದಾದ ಸಹಾಯ.

೧. ಯಾವುದೇ ಕನ್ನಡ ಪುಸ್ತಕದ ಪ್ರಕಟಣೆಯ ವಿಚಾರ ನಿಮ್ಮ ಕಣ್ಣಿಗೆ ಬಿದ್ದಾಗ ಅದರ ವಿವರವನ್ನು ನನಗೆ ಇಮೇಲ್ ಅಥವಾ ಬ್ಲಾಗ್ ಮೂಲಕ ತಿಳಿಸಿ. ಪುಸ್ತಕದ ಹೆಸರು, ಬೆಲೆ, ಲೇಖಕರ ಹೆಸರು, ಪ್ರಕಾಶಕರ ವಿಳಾಸ ಇಷ್ಟಾದರೂ ಇರಲಿ. ಅವರ ಫೋನ್ ನಂಬರ್ ಹಾಗೂ ಇಮೇಲ್ ವಿಳಾಸಗಳನ್ನು ಒದಗಿಸಿದರೆ ಒಳ್ಳೆಯದು. ನಿಮ್ಮ ಗೆಳೆಯರಿಗೂ ತಿಳಿಸಿ.

೨. ನಿಮಗೆ ಗೊತ್ತಿರುವ ಪ್ರಕಾಶಕರ ವಿಳಾಸ, ಫೋ.ನಂ. ಇಮೇಲ್ ಅಡ್ರೆಸ್ ಗಳನ್ನು ನನಗೆ ತಿಳಿಸಿ.

೩. ನೀವೇ ಪ್ರಕಾಶಕರೇ? ಸಂತೋಷ. ನಿಮ್ಮ ಪುಸ್ತಕಗಳ ವಿವರಗಳನ್ನು ನೀಡಿ. ನಿಮ್ಮ ಪರಿಚಯದ ಪ್ರಕಾಶಕರಿಗೂ ತಿಳಿಸಿ. ವ್ಯಾವಹಾರಿಕವಾಗಿಯೂ ಇದೊಂದು ತಕ್ಷಣವೇ ಒಪ್ಪಿಕೊಳ್ಳಬಹುದಾದ ಆಹ್ವಾನವಲ್ಲವೇ?

ನನ್ನ ಇಮೇಲ್ ವಿಳಾಸ: g.mruthyunjaya@gmail.com

ಸೋಮವಾರ, ಆಗಸ್ಟ್ 9, 2010

ನನ್ನಿಂದ ಆಗದು-ನಮ್ಮಿಂದ ಆದೀತು!


` ಪ್ರಾಂಶು ಲಭ್ಯೇ ಫಲೇ ಲೋಭಾದುದ್ಬಾಹುರಿವ ವಾಮನಃ' ಎಂದು ನಿಜವಾಗಿ ತ್ರಿವಿಕ್ರಮನೇ ಆಗಿದ್ದ ಕಾಳಿದಾಸ ಹೇಳಿದ್ದಾನೆ. ನಾನಂತೂ ವಾಮನರಲ್ಲಿ ವಾಮನ. ಆದರೆ ಎತ್ತರದಲ್ಲಿರುವ ಫಲದತ್ತ ಕೈಯನ್ನಂತೂ ಎತ್ತಿದ್ದೇನೆ! ನನ್ನೊಬ್ಬನಿಂದ ಆಗಬಹುದಾದ ಕೆಲಸವಲ್ಲ ಇದು. ನೀವೆಲ್ಲ ಕೈ ಜೋಡಿಸಿದರೆ ಖಂಡಿತ ಸಾಧ್ಯವಾದೀತೆಂದು ಗಟ್ಟಿಯಾಗಿ ನಂಬಿದ್ದೇನೆ. ನಾನು ಕಂಪ್ಯೂಟರ್ ಪ್ರೋಗ್ರಾಂಗಳ ನಿಪುಣನಲ್ಲ. ಬ್ಲಾಗ್ ಎಂಬ ಪ್ರಪಂಚಕ್ಕೆ ಈಗಷ್ಟೇ ಕಾಲಿರಿಸಿದ ಬಾಲಕ. ಮಾಹಿತಿಯನ್ನು ಕಲೆಹಾಕುವುದಂತೂ ಒಬ್ಬನಿಂದ ಆಗುವ ಕೆಲಸವೇ ಅಲ್ಲ. ನೀವು, ಸಹ ಬ್ಲಾಗಿಗರು, ಪ್ರಕಾಶಕರು, ಎಲ್ಲ ಕೈಜೋಡಿಸಿದರಷ್ಟೇ ಆಗುವ ಕೆಲಸ ಇದು. ಯಾವುದೇ ಕನ್ನಡ ಪುಸ್ತಕದ ಪ್ರಕಟಣೆಯ ವಿಚಾರ ನಿಮ್ಮ ಗಮನಕ್ಕೆ ಬಂದೊಡನೆ ಇಮೇಲ್ ಮುಖಾಂತರವೋ, ಬ್ಲಾಗಿನಲ್ಲಿ ಮೆಸೇಜ್ ಕೊಡುವ ಮೂಲಕವೋ ನನಗೆ ತಿಳಿಸಿ. ನಾನು ಲಿಸ್ಟಿನಲ್ಲಿ ಸೇರಿಸುತ್ತೇನೆ. ಈ ಬ್ಲಾಗನ್ನು ಹೇಗೆ ಸುಧಾರಿಸಬಹುದು, ಸುಲಭ ಮಾರ್ಗಗಳೇನು ಎಂಬ ವಿಚಾರವನ್ನೆಲ್ಲ, trick of the trade ಗಳನ್ನೆಲ್ಲ, ಸಹ ಬ್ಲಾಗಿಗರೇ , ನೀವು ತಿಳಿಸಿಕೊಡಬೇಕು.ಅದಕ್ಕೇ ಹೇಳುತ್ತಿದ್ದೇನೆ ಇದು ನನ್ನಿಂದ ಆಗದು-ನಮ್ಮಿಂದ ಆದೀತು! 

ಮಂಗಳವಾರ, ಆಗಸ್ಟ್ 3, 2010

ಈ ಬ್ಲಾಗಿನ ಮೂಲಕ

ಈ ಬ್ಲಾಗಿನ ಮೂಲಕ-
೧. ಈಗ ಲಭ್ಯವಿರುವ ಎಲ್ಲ ಕನ್ನಡ ಪುಸ್ತಕಗಳ ಸಂಕ್ಷಿಪ್ತ ವಿವರ ಮೌಸಿನ ಒಂದು ಕ್ಲಿಕ್ಕಿನಲ್ಲಿ ಲಭ್ಯವಾಗಬೇಕು. ಆ ವಿವರ ಅಪ್ಡೇಟ್ ಆಗುತ್ತಲೇ ಇರಬೇಕು.
೨. ಅಗತ್ಯವುಳ್ಳವರಿಗೆ ಇದೊಂದು ಆಕರ ಸ್ಥಳವಾಗಬೇಕು.
೩. ಸುಮ್ಮನೆ ಕಣ್ಣು ಆಡಿಸುವವರಿಗೂ ತಾವು ಕೊಳ್ಳಬೇಕಾದ ಪುಸ್ತಕ ಒಂದು ಇಲ್ಲಿದೆ ಎಂದು ಕಾಣಬೇಕು.
೪. ಕುಳಿತಲ್ಲಿಂದಲೇ ಬೇಕಾದ ಪುಸ್ತಕವೊಂದನ್ನು ತರಿಸಿಕೊಳ್ಳಲು ಸಾಧ್ಯವಾಗಬೇಕು. ಪುಸ್ತಕಗಳಿಂದ ದೂರವಿರುವವರು ಹತ್ತಿರ ಬರುವಂತಾಗಬೇಕು. ಆ ಮೂಲಕ ಕನ್ನಡ ಪುಸ್ತಕಗಳ ಓದುಗರ ಸಂಖ್ಯೆ ಬೆಳೆಯಬೇಕು.
೫. ಮಾಹಿತಿಯ ಕೊರತೆಯಿಂದಾಗಿ ಪುಸ್ತಕವೊಂದನ್ನು ಪಡೆಯಲಾಗದ ಸನ್ನಿವೇಶವನ್ನು ನಿವಾರಿಸಿಕೊಡುವ ಮೂಲಕ ಪುಸ್ತಕಪ್ರಿಯರಿಗೆ ಇದೊಂದು ನೆಚ್ಚಿನ ತಾಣವಾಗಬೇಕು.
೬. ನಡೆಯಲಿರುವ ಯಾವುದೇ  ಪುಸ್ತಕ ಪ್ರಕಾಶನ, ಬಿಡುಗಡೆ, ಪ್ರದರ್ಶನ, ಮೇಳಗಳ ವಾರ್ತೆ ಇಲ್ಲಿ ಮುಂಚಿತವಾಗಿ ಸಿಗಬೇಕು.
೭. ರಾಜ್ಯದ ಎಲ್ಲ ಕನ್ನಡ ಪುಸ್ತಕ ಪ್ರಕಾಶಕರ ವಿಳಾಸ ಒಂದೇ  ಕಡೆ ಸಿಗಬೇಕು.
  ಮುಂದೆ.. ನನ್ನಿಂದ ಆಗದು-ನಮ್ಮಿಂದ ಆದೀತು!

ಬ್ಲಾಗಿನ ಉದ್ದೇಶ

ಬ್ಲಾಗಿನ ಉದ್ದೇಶ
ಕನ್ನಡದಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ವಿವರಗಳು ಒಂದು ಕಡೆ ಸಿಗುವಂತೆ ಮಾಡುವುದೇ ಈ ಬ್ಲಾಗಿನ ಉದ್ದೇಶ. ಇದು ತಕ್ಷಣದಲ್ಲಿ ಅಸಾಧ್ಯ; ನಿಜ. ಎಂತಹ ದೂರದ ಪ್ರಯಾಣವಾದರೂ ಮೊದಲ ಒಂದು ಹೆಜ್ಜೆಯಿಂದಲೇ ಆರಂಭವಾಗಬೇಕಲ್ಲವೇ? ಹಾಗೆ ಇದು ಮೊದಲ ಹೆಜ್ಜೆ. ಹಾಗೆಯೇ ಹೊಸ ಪುಸ್ತಕಗಳು ಪ್ರಕಟವಾದಂತೆಲ್ಲ ಅವುಗಳ ವಿವರ ಸೇರುತ್ತ ಹೋಗಬೇಕು. ಈ ಕೋಶದಲ್ಲಿ ಪುಸ್ತಕದ ಹೆಸರು, ಲೇಖಕರ ಹೆಸರು , ಪ್ರಕಾರ, ಬೆಲೆ ಹಾಗೂ ಪ್ರಕಾಶಕರ ವಿಳಾಸ ಇಷ್ಟು ಇರಬೇಕು. ವಿಳಾಸದಲ್ಲಿ ಫೋನ್ ನಂಬರ್ ಹಾಗೂ ಇಮೇಲ್ ವಿಳಾಸ ಇರಬೇಕು. ಯಾವ ಪುಸ್ತಕ ಎಲ್ಲಿ ಸಿಗುತ್ತದೆ ಎಂದು ಗೊತ್ತಾದರೆ ಅಪೇಕ್ಷಿಸಿದವರು ಪ್ರಕಾಶಕರ ವಿಳಾಸಕ್ಕೆ ಬರೆದೋ ಫೋನ್ ಮಾಡಿಯೋ ತರಿಸಿಕೊಳ್ಳಬಹುದು.