ಶುಕ್ರವಾರ, ಅಕ್ಟೋಬರ್ 29, 2010

ವಿದೇಶ ವಾಸದಿಂದಾಗಿ ಕೆಲಸ ಸ್ಥಗಿತವಾಗಿತ್ತು. ಈಗ ಸ್ವದೇಶಕ್ಕೆ ಮರಳಿ ಬಂದಿದ್ದೇನೆ. ಇನ್ನು ಮಾಹಿತಿ ಸಂಗ್ರಹಣೆ ಸುಲಭ. ಆದರೆ ಅಗಾಧವಾದ ಮಾಹಿತಿಯನ್ನು ಕೋಶದೊಳಗೆ ಸೇರಿಸಲು ಪೂರ್ಣಾವಧಿ ಕೆಲಸಗಾರರು ಅಗತ್ಯ. ಅವರನ್ನು ಹುಡುಕುತ್ತಿದ್ದೇನೆ. ನವೆಂಬರಿನಲ್ಲಿ   ಪುಸ್ತಕಮೇಳ ಜರುಗಲಿದೆ. ಆಗ ಅನೇಕ ಪ್ರಕಾಶಕರ ಪ್ರಕಟಣೆಗಳ ವಿವರ ಲಭ್ಯವಾಗುತ್ತದೆ. ಅವನ್ನು ಸಂಪಾದಿಸಿಕೊಂಡು ಕೋಶವನ್ನು ತುಂಬಬೇಕಾಗಿದೆ. ಅಲ್ಲದೆ ಕೋಶದಲ್ಲಿನ ಮಾಹಿತಿಯನ್ನು ಹುಡುಕುವವರಿಗೆ ಅನುಕೂಲವಾಗುವ ರೀತಿಯಲ್ಲಿ  ಬೇರೆ ರೀತಿಯಲ್ಲಿ ಕೊಡುವ ಆಲೋಚನೆಯಿದೆ. ಅಲ್ಲಿಯವರೆಗೂ ಬ್ಲಾಗ್ ಈಗಿನಂತೆಯೇ  LOW PROFILE ನಲ್ಲೇ ಇರಲಿ. ಕೋಶ ಸಾಕಷ್ಟು ಪುಷ್ಟವಾದಮೇಲೆ ಪ್ರಚಾರ ನೀಡಬೇಕು.