ಶುಕ್ರವಾರ, ಅಕ್ಟೋಬರ್ 29, 2010
ವಿದೇಶ ವಾಸದಿಂದಾಗಿ ಕೆಲಸ ಸ್ಥಗಿತವಾಗಿತ್ತು. ಈಗ ಸ್ವದೇಶಕ್ಕೆ ಮರಳಿ ಬಂದಿದ್ದೇನೆ. ಇನ್ನು ಮಾಹಿತಿ ಸಂಗ್ರಹಣೆ ಸುಲಭ. ಆದರೆ ಅಗಾಧವಾದ ಮಾಹಿತಿಯನ್ನು ಕೋಶದೊಳಗೆ ಸೇರಿಸಲು ಪೂರ್ಣಾವಧಿ ಕೆಲಸಗಾರರು ಅಗತ್ಯ. ಅವರನ್ನು ಹುಡುಕುತ್ತಿದ್ದೇನೆ. ನವೆಂಬರಿನಲ್ಲಿ ಪುಸ್ತಕಮೇಳ ಜರುಗಲಿದೆ. ಆಗ ಅನೇಕ ಪ್ರಕಾಶಕರ ಪ್ರಕಟಣೆಗಳ ವಿವರ ಲಭ್ಯವಾಗುತ್ತದೆ. ಅವನ್ನು ಸಂಪಾದಿಸಿಕೊಂಡು ಕೋಶವನ್ನು ತುಂಬಬೇಕಾಗಿದೆ. ಅಲ್ಲದೆ ಕೋಶದಲ್ಲಿನ ಮಾಹಿತಿಯನ್ನು ಹುಡುಕುವವರಿಗೆ ಅನುಕೂಲವಾಗುವ ರೀತಿಯಲ್ಲಿ ಬೇರೆ ರೀತಿಯಲ್ಲಿ ಕೊಡುವ ಆಲೋಚನೆಯಿದೆ. ಅಲ್ಲಿಯವರೆಗೂ ಬ್ಲಾಗ್ ಈಗಿನಂತೆಯೇ LOW PROFILE ನಲ್ಲೇ ಇರಲಿ. ಕೋಶ ಸಾಕಷ್ಟು ಪುಷ್ಟವಾದಮೇಲೆ ಪ್ರಚಾರ ನೀಡಬೇಕು.
ಬುಧವಾರ, ಸೆಪ್ಟೆಂಬರ್ 29, 2010
"ಚಂದನ ದ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ನಾ.ಸೋಮೇಶ್ವರ ಅವರು ಪರಿಚಯಿಸಿದ ಪುಸ್ತಕ ಎಲ್ಲಿ ಮಾರಾಟಕ್ಕಿದೆ ಎಂಬುದನ್ನೂ ತಿಳಿಸಿದರೆ ಪುಸ್ತಕಪ್ರಿಯರಿಗೆ ಅನುಕೂಲವಾಗುತ್ತದೆ" ಎಂಬುದಾಗಿ ಇದೇ ೯ರ ಸುಧಾದ ಜಾಣರ ಪೆಟ್ಟಿಗೆಯಲ್ಲಿ ಅರಸೀಕೆರೆಯ ಎಂ.ಸರ್ದಾರ್ ಬರೆದಿದ್ದಾರೆ.
ಇದನ್ನು ಓದಿದಾಗ ನನ್ನ ಈ ಬ್ಲಾಗಿಗೆ ಅರ್ಥವಿದೆಯೆನ್ನಿಸಿತು. ಇಂತಹ ಅನೇಕ ಪುಸ್ತಕಪ್ರಿಯರ ಪ್ರಶ್ನೆಗಳಿಗೆ ಉತ್ತರವಾಗಿ ಈ ಬ್ಲಾಗಿನ ಪುಸ್ತಕ ಮಾಹಿತಿ ಕೋಶ ಇಲ್ಲಿದೆ ಪುಸ್ತಕ!(.) ರೂಪುಗೊಳ್ಳಬೇಕೆಂಬುದೇ ನನ್ನ ಅಪೇಕ್ಷೆ.

ಗುರುವಾರ, ಸೆಪ್ಟೆಂಬರ್ 23, 2010
ನೀವು ಬಾಲ್ಯದಲ್ಲಿ ಚಂದಮಾಮ ಓದಿ ಆನಂದಿಸಿದವರೇ? ಅದರ ಹಳೆಯ ಸಂಚಿಕೆಗಳನ್ನು ನೋಡುವ ಆಸೆಯಿದೆಯೇ? ಹಾಗಿದ್ದರೆ ಈ ಮಾಹಿತಿಗೆ ಸಂತೋಷಪಡಿ; ೧೯೪೯ ಜುಲೈ ನಷ್ಟು ಹಳೆಯ ಸಂಚಿಕೆಗಳು ಈಗ ಆನ್ ಲೈನ್ ಲಭ್ಯ. ಮರುಕಳಿಸಿದ ಬಾಲ್ಯದ ನೆನಪುಗಳೊಂದಿಗೆ ಆನಂದಿಸಿ! ವಿವರಗಳು ಇಲ್ಲಿದೆ ಪುಸ್ತಕ! ದಲ್ಲಿದೆ. ಅಲ್ಲಿಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ>(:)
ಈ ಮಾಹಿತಿ ಲಭ್ಯವಾಗಿದ್ದು ವಿಜಯ ಕರ್ನಾಟಕ ದ ಖ್ಯಾತ ಅಂಕಣಬರಹಗಾರರಾದ ಶ್ರೀವತ್ಸ ಜೋಶಿಯವರಿಂದ. ಅವರಿಗೆ ಕೃತಜ್ಞತೆಗಳು.

ಶುಕ್ರವಾರ, ಸೆಪ್ಟೆಂಬರ್ 17, 2010
ಈಗಿನ ಮಾಹಿತಿಗೆ ಕ್ಲಿಕ್ ಮಾಡಿ->(:)
ಈ ಬ್ಲಾಗಿಗೆ ಸ್ಪಂದಿಸಿ ತಮ್ಮ ಪ್ರಕಾಶನದ ಹಾಗೂ ಪ್ರಕಟಿತ ಪುಸ್ತಕಗಳ ವಿವರಗಳನ್ನು ನೀಡಿದ ಮೊದಲ ಪ್ರಕಾಶಕರು ಸೃಷ್ಟಿ ನಾಗೇಶ್. ಅವರಿಗೆ ವಂದನೆಗಳು. ಅವರು ನೀಡಿದ ವಿವರಗಳನ್ನು ಕೋಶದಲ್ಲಿ ಸೇರಿಸಿದ್ದೇನೆ. ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ನೋಡಬಹುದು.

ಬುಧವಾರ, ಸೆಪ್ಟೆಂಬರ್ 15, 2010
ಸಪ್ನಾ ಬುಕ್ ಹೌಸ್ ನಿಂದ ಯಾವುದೇ ಮಾಹಿತಿ ಬಂದಿಲ್ಲ.
ಸೃಷ್ಟಿ ನಾಗೇಶ್ ಅವರು ಸೃಷ್ಟಿ ಪಬ್ಲಿಕೇಷನ್ಸ್ ನ ಇಮೇಲ್ ವಿಳಾಸಗಳನ್ನೂ ಫೋನ್ ನಂಬರನ್ನೂ ನೀಡಿದ್ದಾರೆ. ಅವರಿಗೆ ವಂದನೆಗಳು. ದಯವಿಟ್ಟು ಗಮನಿಸಿ:ಮೊದಲನೇ ವಿಳಾಸದಲ್ಲಿ srushti ಆದಮೇಲೆ ಒಂದು ಅಂಡರ್ ಸ್ಕೋರ್ ಇದೆ. ಅದು ಅಂಡರ್ ಲೈನ್ ನಲ್ಲಿ ಮುಚ್ಚಿ ಹೋಗಿದೆ.

ಬುಧವಾರ, ಸೆಪ್ಟೆಂಬರ್ 8, 2010
ಸಪ್ನಾ ಬುಕ್ ಹೌಸಿನಿಂದ ನನ್ನ ಇ ಮೈಲಿಗೆ ಉತ್ತರವನ್ನು ಕಾಯುತ್ತಿದ್ದೇನೆ.
ಸೋಮವಾರ, ಆಗಸ್ಟ್ 30, 2010
ವಿಜಯಕರ್ನಾಟಕದಲ್ಲಿ ಪ್ರಕಟವಾದ ಮಾಹಿತಿಯನ್ನು ತೆಗೆದುಕೊಂಡು ಕೆಲವು ಪುಸ್ತಕಗಳ ವಿವರವನ್ನು ಸೇರಿಸಿದ್ದೇನೆ.ಪತ್ರಿಕೆಗೆ ಕೃತಜ್ಞ.
ಸಪ್ನಾ ಬುಕ್ ಹೌಸಿಗೆ ಅವರು ಪ್ರಕಟಿಸಿದ ಪುಸ್ತಕಗಳ ವಿವರವನ್ನು ಕೇಳಿದ್ದೇನೆ.

ಸೋಮವಾರ, ಆಗಸ್ಟ್ 23, 2010
ಇಲ್ಲಿದೆ ಪುಸ್ತಕ!
ಇದುವರೆಗೆ ಸಂಪಾದಿಸಿದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇದುವರೆಗೆ ಸಂಪಾದಿಸಿರುವ `ಕನ್ನಡ ಪುಸ್ತಕಗಳ ಸಂಕ್ಷಿಪ್ತ ವಿವರ' ಕ್ಕೆ ಇಲ್ಲಿ ಕ್ಲಿಕ್ ಮಾಡಿ: https://docs.google.com/document/edit?id=1qNLJlMWlTeGw1Ci2jJA2tyMXdpDAXXrRpgpckLH5tNE&hl=en#
ಇದೋ! ಇದು ಪ್ರಯಾಣದ ಮೊದಲ ಹೆಜ್ಜೆ!
ಇದುವರೆಗೆ ನಾನು ಸಂಗ್ರಹಿಸಿರುವ ಮಾಹಿತಿಯನ್ನು ಗೂಗಲ್ ಡಾಕ್ಯುಮೆಂಟ್ ನ ಅಡಿಯಲ್ಲಿ ಪಟ್ಟಿ ಮಾಡಿದ್ದೇನೆ. ಅದು ಈ ಲಿಂಕಿನಲ್ಲಿ ಸಿಗುತ್ತದೆ:https://docs.google.com/document/edit?id=1qNLJlMWlTeGw1Ci2jJA2tyMXdpDAXXrRpgpckLH5tNE&hl=en#
ನೋಡುಗರಿಗೆ ಅನುಕೂಲವಾಗುವಂತೆ ಇದನ್ನು ರೂಪಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೇನೆ. ಇದರಲ್ಲಿ ಕೊರತೆಗಳಿಲ್ಲವೆಂದಲ್ಲ.
ಇದು ಆರಂಭವಷ್ಟೇ. ಕ್ರಮೇಣ ಇನ್ನೂ ಒಳ್ಳೆಯ ರೂಪ ಬರಬಹುದು. ನೋಡೋಣ.
ಸದ್ಯ ನಾನು ವಿದೇಶದಲ್ಲಿರುವುದರಿಂದ ಮಾಹಿತಿ ಸಂಗ್ರಹಣೆ ಸುಲಭಸಾಧ್ಯವಲ್ಲ. ಆದರೂ ಸಾಧ್ಯವಾದಷ್ಟನ್ನು ಮಾಡುತ್ತಿದ್ದೇನೆ.ಮನೆಗೆ ತಿರುಗಿ ಬಂದ ನಂತರ ಪ್ರಕಾಶಕರನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿ ಪ್ರಕಟಿಸುತ್ತೇನೆ. ನನಗೆ ಮಾಹಿತಿ ನೀಡಲು ಅಪೇಕ್ಷಿಸುವವರು ನನ್ನ ಇ ಮೇಲಿಗೆ ಕನ್ನಡ ಲಿಪಿಯಲ್ಲಿ ಕಳಿಸಿದರೆ ನಾನು ಪಟ್ಟಿಯಲ್ಲಿ ಸೇರಿಸುತ್ತೇನೆ.

ಸೋಮವಾರ, ಆಗಸ್ಟ್ 16, 2010
ನೀವು ಮಾಡಬಹುದಾದ ಸಹಾಯ.
೧. ಯಾವುದೇ ಕನ್ನಡ ಪುಸ್ತಕದ ಪ್ರಕಟಣೆಯ ವಿಚಾರ ನಿಮ್ಮ ಕಣ್ಣಿಗೆ ಬಿದ್ದಾಗ ಅದರ ವಿವರವನ್ನು ನನಗೆ ಇಮೇಲ್ ಅಥವಾ ಬ್ಲಾಗ್ ಮೂಲಕ ತಿಳಿಸಿ. ಪುಸ್ತಕದ ಹೆಸರು, ಬೆಲೆ, ಲೇಖಕರ ಹೆಸರು, ಪ್ರಕಾಶಕರ ವಿಳಾಸ ಇಷ್ಟಾದರೂ ಇರಲಿ. ಅವರ ಫೋನ್ ನಂಬರ್ ಹಾಗೂ ಇಮೇಲ್ ವಿಳಾಸಗಳನ್ನು ಒದಗಿಸಿದರೆ ಒಳ್ಳೆಯದು. ನಿಮ್ಮ ಗೆಳೆಯರಿಗೂ ತಿಳಿಸಿ.
೨. ನಿಮಗೆ ಗೊತ್ತಿರುವ ಪ್ರಕಾಶಕರ ವಿಳಾಸ, ಫೋ.ನಂ. ಇಮೇಲ್ ಅಡ್ರೆಸ್ ಗಳನ್ನು ನನಗೆ ತಿಳಿಸಿ.
೩. ನೀವೇ ಪ್ರಕಾಶಕರೇ? ಸಂತೋಷ. ನಿಮ್ಮ ಪುಸ್ತಕಗಳ ವಿವರಗಳನ್ನು ನೀಡಿ. ನಿಮ್ಮ ಪರಿಚಯದ ಪ್ರಕಾಶಕರಿಗೂ ತಿಳಿಸಿ. ವ್ಯಾವಹಾರಿಕವಾಗಿಯೂ ಇದೊಂದು ತಕ್ಷಣವೇ ಒಪ್ಪಿಕೊಳ್ಳಬಹುದಾದ ಆಹ್ವಾನವಲ್ಲವೇ?
ನನ್ನ ಇಮೇಲ್ ವಿಳಾಸ: g.mruthyunjaya@gmail.com

ಸೋಮವಾರ, ಆಗಸ್ಟ್ 9, 2010
ನನ್ನಿಂದ ಆಗದು-ನಮ್ಮಿಂದ ಆದೀತು!
` ಪ್ರಾಂಶು ಲಭ್ಯೇ ಫಲೇ ಲೋಭಾದುದ್ಬಾಹುರಿವ ವಾಮನಃ' ಎಂದು ನಿಜವಾಗಿ ತ್ರಿವಿಕ್ರಮನೇ ಆಗಿದ್ದ ಕಾಳಿದಾಸ ಹೇಳಿದ್ದಾನೆ. ನಾನಂತೂ ವಾಮನರಲ್ಲಿ ವಾಮನ. ಆದರೆ ಎತ್ತರದಲ್ಲಿರುವ ಫಲದತ್ತ ಕೈಯನ್ನಂತೂ ಎತ್ತಿದ್ದೇನೆ! ನನ್ನೊಬ್ಬನಿಂದ ಆಗಬಹುದಾದ ಕೆಲಸವಲ್ಲ ಇದು. ನೀವೆಲ್ಲ ಕೈ ಜೋಡಿಸಿದರೆ ಖಂಡಿತ ಸಾಧ್ಯವಾದೀತೆಂದು ಗಟ್ಟಿಯಾಗಿ ನಂಬಿದ್ದೇನೆ. ನಾನು ಕಂಪ್ಯೂಟರ್ ಪ್ರೋಗ್ರಾಂಗಳ ನಿಪುಣನಲ್ಲ. ಬ್ಲಾಗ್ ಎಂಬ ಪ್ರಪಂಚಕ್ಕೆ ಈಗಷ್ಟೇ ಕಾಲಿರಿಸಿದ ಬಾಲಕ. ಮಾಹಿತಿಯನ್ನು ಕಲೆಹಾಕುವುದಂತೂ ಒಬ್ಬನಿಂದ ಆಗುವ ಕೆಲಸವೇ ಅಲ್ಲ. ನೀವು, ಸಹ ಬ್ಲಾಗಿಗರು, ಪ್ರಕಾಶಕರು, ಎಲ್ಲ ಕೈಜೋಡಿಸಿದರಷ್ಟೇ ಆಗುವ ಕೆಲಸ ಇದು. ಯಾವುದೇ ಕನ್ನಡ ಪುಸ್ತಕದ ಪ್ರಕಟಣೆಯ ವಿಚಾರ ನಿಮ್ಮ ಗಮನಕ್ಕೆ ಬಂದೊಡನೆ ಇಮೇಲ್ ಮುಖಾಂತರವೋ, ಬ್ಲಾಗಿನಲ್ಲಿ ಮೆಸೇಜ್ ಕೊಡುವ ಮೂಲಕವೋ ನನಗೆ ತಿಳಿಸಿ. ನಾನು ಲಿಸ್ಟಿನಲ್ಲಿ ಸೇರಿಸುತ್ತೇನೆ. ಈ ಬ್ಲಾಗನ್ನು ಹೇಗೆ ಸುಧಾರಿಸಬಹುದು, ಸುಲಭ ಮಾರ್ಗಗಳೇನು ಎಂಬ ವಿಚಾರವನ್ನೆಲ್ಲ, trick of the trade ಗಳನ್ನೆಲ್ಲ, ಸಹ ಬ್ಲಾಗಿಗರೇ , ನೀವು ತಿಳಿಸಿಕೊಡಬೇಕು.ಅದಕ್ಕೇ ಹೇಳುತ್ತಿದ್ದೇನೆ ಇದು ನನ್ನಿಂದ ಆಗದು-ನಮ್ಮಿಂದ ಆದೀತು!

ಮಂಗಳವಾರ, ಆಗಸ್ಟ್ 3, 2010
ಈ ಬ್ಲಾಗಿನ ಮೂಲಕ
ಈ ಬ್ಲಾಗಿನ ಮೂಲಕ-
೧. ಈಗ ಲಭ್ಯವಿರುವ ಎಲ್ಲ ಕನ್ನಡ ಪುಸ್ತಕಗಳ ಸಂಕ್ಷಿಪ್ತ ವಿವರ ಮೌಸಿನ ಒಂದು ಕ್ಲಿಕ್ಕಿನಲ್ಲಿ ಲಭ್ಯವಾಗಬೇಕು. ಆ ವಿವರ ಅಪ್ಡೇಟ್ ಆಗುತ್ತಲೇ ಇರಬೇಕು.
೨. ಅಗತ್ಯವುಳ್ಳವರಿಗೆ ಇದೊಂದು ಆಕರ ಸ್ಥಳವಾಗಬೇಕು.
೩. ಸುಮ್ಮನೆ ಕಣ್ಣು ಆಡಿಸುವವರಿಗೂ ತಾವು ಕೊಳ್ಳಬೇಕಾದ ಪುಸ್ತಕ ಒಂದು ಇಲ್ಲಿದೆ ಎಂದು ಕಾಣಬೇಕು.
೪. ಕುಳಿತಲ್ಲಿಂದಲೇ ಬೇಕಾದ ಪುಸ್ತಕವೊಂದನ್ನು ತರಿಸಿಕೊಳ್ಳಲು ಸಾಧ್ಯವಾಗಬೇಕು. ಪುಸ್ತಕಗಳಿಂದ ದೂರವಿರುವವರು ಹತ್ತಿರ ಬರುವಂತಾಗಬೇಕು. ಆ ಮೂಲಕ ಕನ್ನಡ ಪುಸ್ತಕಗಳ ಓದುಗರ ಸಂಖ್ಯೆ ಬೆಳೆಯಬೇಕು.
೫. ಮಾಹಿತಿಯ ಕೊರತೆಯಿಂದಾಗಿ ಪುಸ್ತಕವೊಂದನ್ನು ಪಡೆಯಲಾಗದ ಸನ್ನಿವೇಶವನ್ನು ನಿವಾರಿಸಿಕೊಡುವ ಮೂಲಕ ಪುಸ್ತಕಪ್ರಿಯರಿಗೆ ಇದೊಂದು ನೆಚ್ಚಿನ ತಾಣವಾಗಬೇಕು.
೬. ನಡೆಯಲಿರುವ ಯಾವುದೇ ಪುಸ್ತಕ ಪ್ರಕಾಶನ, ಬಿಡುಗಡೆ, ಪ್ರದರ್ಶನ, ಮೇಳಗಳ ವಾರ್ತೆ ಇಲ್ಲಿ ಮುಂಚಿತವಾಗಿ ಸಿಗಬೇಕು.
೭. ರಾಜ್ಯದ ಎಲ್ಲ ಕನ್ನಡ ಪುಸ್ತಕ ಪ್ರಕಾಶಕರ ವಿಳಾಸ ಒಂದೇ ಕಡೆ ಸಿಗಬೇಕು.
ಮುಂದೆ.. ನನ್ನಿಂದ ಆಗದು-ನಮ್ಮಿಂದ ಆದೀತು!

ಬ್ಲಾಗಿನ ಉದ್ದೇಶ
ಬ್ಲಾಗಿನ ಉದ್ದೇಶ
ಕನ್ನಡದಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ವಿವರಗಳು ಒಂದು ಕಡೆ ಸಿಗುವಂತೆ ಮಾಡುವುದೇ ಈ ಬ್ಲಾಗಿನ ಉದ್ದೇಶ. ಇದು ತಕ್ಷಣದಲ್ಲಿ ಅಸಾಧ್ಯ; ನಿಜ. ಎಂತಹ ದೂರದ ಪ್ರಯಾಣವಾದರೂ ಮೊದಲ ಒಂದು ಹೆಜ್ಜೆಯಿಂದಲೇ ಆರಂಭವಾಗಬೇಕಲ್ಲವೇ? ಹಾಗೆ ಇದು ಮೊದಲ ಹೆಜ್ಜೆ. ಹಾಗೆಯೇ ಹೊಸ ಪುಸ್ತಕಗಳು ಪ್ರಕಟವಾದಂತೆಲ್ಲ ಅವುಗಳ ವಿವರ ಸೇರುತ್ತ ಹೋಗಬೇಕು. ಈ ಕೋಶದಲ್ಲಿ ಪುಸ್ತಕದ ಹೆಸರು, ಲೇಖಕರ ಹೆಸರು , ಪ್ರಕಾರ, ಬೆಲೆ ಹಾಗೂ ಪ್ರಕಾಶಕರ ವಿಳಾಸ ಇಷ್ಟು ಇರಬೇಕು. ವಿಳಾಸದಲ್ಲಿ ಫೋನ್ ನಂಬರ್ ಹಾಗೂ ಇಮೇಲ್ ವಿಳಾಸ ಇರಬೇಕು. ಯಾವ ಪುಸ್ತಕ ಎಲ್ಲಿ ಸಿಗುತ್ತದೆ ಎಂದು ಗೊತ್ತಾದರೆ ಅಪೇಕ್ಷಿಸಿದವರು ಪ್ರಕಾಶಕರ ವಿಳಾಸಕ್ಕೆ ಬರೆದೋ ಫೋನ್ ಮಾಡಿಯೋ ತರಿಸಿಕೊಳ್ಳಬಹುದು.

ಬುಧವಾರ, ಜುಲೈ 28, 2010
ಬ್ಲಾಗಿನ ಪರಿಚಯ
ಬ್ಲಾಗಿನ ಪರಿಚಯ
ಕನ್ನಡದಲ್ಲಿ ಅನೇಕ ಪುಸ್ತಕಗಳು, ಅನೇಕ ಪ್ರಕಾಶಕರುಗಳಿಂದ ದಿನಂಪ್ರತಿ ಪ್ರಕಟವಾಗುತ್ತಲೇ ಇರುತ್ತವೆ. ಆದರೆ ಇಡೀ ರಾಜ್ಯದಲ್ಲಿ ಪ್ರಕಟವಾದ ಪುಸ್ತಕಗಳ ವಿವರಗಳನ್ನು ಒಂದು ಕಡೆಯಿಂದ ಪಡೆಯುವ ಸಾಧ್ಯತೆಯಿಲ್ಲ. ದಿನಪತ್ರಿಕೆಗಳಲ್ಲಿ ಪ್ರಕಟವಾಗುವ `ಸಾದರ ಸ್ವೀಕಾರ'ದ ಮೂಲಕವೋ ಅಥವಾ ಪತ್ರಿಕೆಯವರು ಪ್ರಕಟಿಸುವ ` ಹೊಸ ಪ್ರಕಟಣೆಗಳು' ಮೂಲಕವೋ, ಪುಸ್ತಕ ಮೇಳಗಳ ಸಂದರ್ಭದಲ್ಲೋ ಕೆಲವೊಂದು ಪ್ರಕಟಣೆಗಳ ವಿವರ ತಿಳಿಯುತ್ತದೆ.ಆದರೆ ಇದು ನಗಣ್ಯ ಪ್ರಮಾಣ. ಒಬ್ಬ ಓದುಗನು ಎಲ್ಲಾ ಪತ್ರಿಕೆಗಳನ್ನೂ ಓದುತ್ತಿರುವುದೂ ಅಸಾಧ್ಯ. ಸಾಹಿತ್ಯ ಅಕಾದೆಮಿಯೋ ಪ್ರಾಧಿಕಾರವೋ ಸಾಹಿತ್ಯ ಪರಿಷತ್ತೋ ಇದುವರೆಗೆ ಪ್ರಕಟವಾದ ಎಲ್ಲ ಕನ್ನಡ ಪುಸ್ತಕಗಳ ವಿವರಗಳನ್ನು ಸಂಗ್ರಹಿಸಿ ಪಟ್ಟಿ ಮಾಡುವುದು ಸಾಧ್ಯವಿದೆ. ಆದರೆ ಯಾರಾದರೂ ಆ ಕೆಲಸವನ್ನು ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಬಹುಶಃ `ಇಲ್ಲ' ಎಂದು ಹೇಳಿಬಿಡಬಹುದು. (ಹಾಗೊಮ್ಮೆ ಇದ್ದರೆ ದಯವಿಟ್ಟು ನನಗೆ ತಿಳಿಸಿ. ಡುಪ್ಲಿಕೇಟ್ ಕೆಲಸ ಏಕೆ?)
ಒಂದು ಪುಸ್ತಕದ ಅಂಗಡಿಯನ್ನು ಹೊಕ್ಕರೆ ಅಲ್ಲಿರುವ ಪುಸ್ತಕಗಳು ಯಾವುವು ಎಂಬುದನ್ನು ತಿಳಿಯಲು ನೀವು ಒಂದು ಕಡೆಯಿಂದ ನೋಡಿಕೊಂಡು ಬರಬೇಕು. ಎತ್ತರದಲ್ಲಿರುವ ಪುಸ್ತಕಗಳನ್ನು ನೋಡಲೂ ಆಗುವುದಿಲ್ಲ. ಹಾಗೆ ನೋಡಲು ಹೋದರೂ ಎಷ್ಟು ಅಂಗಡಿಗಳನ್ನು ನೋಡಲು ಸಾಧ್ಯ? ಎಷ್ಟು ಊರುಗಳಲ್ಲಿ ಸಾಧ್ಯ? ಎಷ್ಟು ಜನಕ್ಕೆ ಸಾಧ್ಯ? ಬಹಳಷ್ಟು ಮಾರಾಟಗಾರರು ತಮ್ಮಲ್ಲಿ ಸಿಗುವ ಪುಸ್ತಕಗಳ ಪಟ್ಟಿಯನ್ನು ಕಂಪ್ಯೂಟರ್ ಗೂ ಹಾಕಿಲ್ಲ. ನನಗೆ ಸ್ವತಹ ಈ ಮಾಹಿತಿ ಕೊರತೆಯ ಅನುಭವವಾದಾಗ, ನನ್ನ ಕೈಲಾದ ರೀತಿಯಲ್ಲಿ ಈ ಬಗ್ಗೆ ಏನಾದರೂ ಮಾಡಲು ಸಾಧ್ಯವೇ ಎಂದು ಬಹುವಾಗಿ ಯೋಚಿಸಿ ಈ ಕಾಲದ ಅದ್ಭುತ ಆವಿಷ್ಕಾರವಾದ ಕಂಪ್ಯೂಟರ್ ಹಾಗೂ ಅನೂಹ್ಯ ವಿಸ್ಮಯವಾದ ಅಂತರ್ಜಾಲಗಳನ್ನು ಬಳಸಿಕೊಂಡು ಒಂದು ಮಾಹಿತಿ ಕೋಶವನ್ನು ರೂಪಿಸುವ ಐಡಿಯಾ ಬಂತು. ವಿಶ್ವ ಕುಟುಮ್ಬಿಗಳ ಅವಿರತ ಶ್ರಮದಿಂದಾಗಿ ಈಗ ಬ್ಲಾಗ್ ರಚನೆಯು ಸುಲಭವಾಗಿದೆ. ಕನ್ನಡದಲ್ಲೂ ಸಾಧ್ಯವಾಗಿದೆ. ಇದರ ಪ್ರಯೋಜನವನ್ನು ಪಡೆದು ಬ್ಲಾಗ್ ಮೂಲಕ ನನ್ನ ಪ್ರಯತ್ನವನ್ನು ಮುಂದುವರಿಸೋಣವೆಂದುಕೊಂಡು ಈ ಬ್ಲಾಗನ್ನು ರಚಿಸಿದೆ.
ಮುಂದುವರಿಯುತ್ತದೆ ...

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)