ನನ್ನಿಂದ ಆಗದು-ನಮ್ಮಿಂದ ಆದೀತು!
` ಪ್ರಾಂಶು ಲಭ್ಯೇ ಫಲೇ ಲೋಭಾದುದ್ಬಾಹುರಿವ ವಾಮನಃ' ಎಂದು ನಿಜವಾಗಿ ತ್ರಿವಿಕ್ರಮನೇ ಆಗಿದ್ದ ಕಾಳಿದಾಸ ಹೇಳಿದ್ದಾನೆ. ನಾನಂತೂ ವಾಮನರಲ್ಲಿ ವಾಮನ. ಆದರೆ ಎತ್ತರದಲ್ಲಿರುವ ಫಲದತ್ತ ಕೈಯನ್ನಂತೂ ಎತ್ತಿದ್ದೇನೆ! ನನ್ನೊಬ್ಬನಿಂದ ಆಗಬಹುದಾದ ಕೆಲಸವಲ್ಲ ಇದು. ನೀವೆಲ್ಲ ಕೈ ಜೋಡಿಸಿದರೆ ಖಂಡಿತ ಸಾಧ್ಯವಾದೀತೆಂದು ಗಟ್ಟಿಯಾಗಿ ನಂಬಿದ್ದೇನೆ. ನಾನು ಕಂಪ್ಯೂಟರ್ ಪ್ರೋಗ್ರಾಂಗಳ ನಿಪುಣನಲ್ಲ. ಬ್ಲಾಗ್ ಎಂಬ ಪ್ರಪಂಚಕ್ಕೆ ಈಗಷ್ಟೇ ಕಾಲಿರಿಸಿದ ಬಾಲಕ. ಮಾಹಿತಿಯನ್ನು ಕಲೆಹಾಕುವುದಂತೂ ಒಬ್ಬನಿಂದ ಆಗುವ ಕೆಲಸವೇ ಅಲ್ಲ. ನೀವು, ಸಹ ಬ್ಲಾಗಿಗರು, ಪ್ರಕಾಶಕರು, ಎಲ್ಲ ಕೈಜೋಡಿಸಿದರಷ್ಟೇ ಆಗುವ ಕೆಲಸ ಇದು. ಯಾವುದೇ ಕನ್ನಡ ಪುಸ್ತಕದ ಪ್ರಕಟಣೆಯ ವಿಚಾರ ನಿಮ್ಮ ಗಮನಕ್ಕೆ ಬಂದೊಡನೆ ಇಮೇಲ್ ಮುಖಾಂತರವೋ, ಬ್ಲಾಗಿನಲ್ಲಿ ಮೆಸೇಜ್ ಕೊಡುವ ಮೂಲಕವೋ ನನಗೆ ತಿಳಿಸಿ. ನಾನು ಲಿಸ್ಟಿನಲ್ಲಿ ಸೇರಿಸುತ್ತೇನೆ. ಈ ಬ್ಲಾಗನ್ನು ಹೇಗೆ ಸುಧಾರಿಸಬಹುದು, ಸುಲಭ ಮಾರ್ಗಗಳೇನು ಎಂಬ ವಿಚಾರವನ್ನೆಲ್ಲ, trick of the trade ಗಳನ್ನೆಲ್ಲ, ಸಹ ಬ್ಲಾಗಿಗರೇ , ನೀವು ತಿಳಿಸಿಕೊಡಬೇಕು.ಅದಕ್ಕೇ ಹೇಳುತ್ತಿದ್ದೇನೆ ಇದು ನನ್ನಿಂದ ಆಗದು-ನಮ್ಮಿಂದ ಆದೀತು!
ಸರ್ ನಮಸ್ಕಾರ, ನಿಮ್ಮ ಪ್ರಯತ್ನಕ್ಕೆ ನನ್ನೋದೊಂದು ಸಾಥ್ . . .
ಪ್ರತ್ಯುತ್ತರಅಳಿಸಿಇದೆ ತಿಂಗಳ ಅಂದ್ರೆ ಆಗಷ್ಟ್ 22 ಕ್ಕೆ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿದೆ.
ಲೇಖಕರಾದ ಶಿವು ಕೆ ಮತ್ತು ಆಜಾದ್ ರವರು ಬ್ಲಾಗ್ ಲೋಕಕ್ಕೆ ಪರಿಚಿತ.
ಪುಸ್ತಕ : "ಗುಬ್ಬಿ ಎಂಜಲು" -> ಲೇಖಕ: ಶಿವು ಕೆ
ಪುಸ್ತಕ: "ಜಲನಯನ" -> ಲೇಖಕ: ಆಜಾದ್
ಪ್ರಕಾಶನ: "ತುಂತುರು ಪ್ರಕಾಶನ"
ಸ್ಥಳ: "ಕನ್ನಡ ಭವನ" (ರವೀಂದ್ರ ಕಲಾಕ್ಷೇತ್ರ ಹತ್ತಿರ)
ಬೆಂಗಳೂರು.
ಸಮಯ: ಬೆಳಗ್ಗೆ 10 ಘಂಟೆ
ಥ್ಯಾಂಕ್ಸ್ ನಾಗರಾಜ್. ದಯವಿಟ್ಟು ಪ್ರಕಾಶಕರ ವಿಳಾಸ ಹಾಗೂ ಪುಸ್ತಕಗಳ ಬೆಲೆ ಇವುಗಳನ್ನು ತಿಳಿಸುವಿರಾ? ತಪ್ಪು ತಿಳಿಯಬೇಡಿ. ನಾನು ಸದ್ಯ ಭಾರತದಲ್ಲಿಲ್ಲ. ಆದ್ದರಿಂದ ಕೇಳುತ್ತಿದ್ದೇನೆ. ವಂದನೆಗಳು.
ಪ್ರತ್ಯುತ್ತರಅಳಿಸಿ