ಈ ಬ್ಲಾಗಿನ ಮೂಲಕ-
೧. ಈಗ ಲಭ್ಯವಿರುವ ಎಲ್ಲ ಕನ್ನಡ ಪುಸ್ತಕಗಳ ಸಂಕ್ಷಿಪ್ತ ವಿವರ ಮೌಸಿನ ಒಂದು ಕ್ಲಿಕ್ಕಿನಲ್ಲಿ ಲಭ್ಯವಾಗಬೇಕು. ಆ ವಿವರ ಅಪ್ಡೇಟ್ ಆಗುತ್ತಲೇ ಇರಬೇಕು.
೨. ಅಗತ್ಯವುಳ್ಳವರಿಗೆ ಇದೊಂದು ಆಕರ ಸ್ಥಳವಾಗಬೇಕು.
೩. ಸುಮ್ಮನೆ ಕಣ್ಣು ಆಡಿಸುವವರಿಗೂ ತಾವು ಕೊಳ್ಳಬೇಕಾದ ಪುಸ್ತಕ ಒಂದು ಇಲ್ಲಿದೆ ಎಂದು ಕಾಣಬೇಕು.
೪. ಕುಳಿತಲ್ಲಿಂದಲೇ ಬೇಕಾದ ಪುಸ್ತಕವೊಂದನ್ನು ತರಿಸಿಕೊಳ್ಳಲು ಸಾಧ್ಯವಾಗಬೇಕು. ಪುಸ್ತಕಗಳಿಂದ ದೂರವಿರುವವರು ಹತ್ತಿರ ಬರುವಂತಾಗಬೇಕು. ಆ ಮೂಲಕ ಕನ್ನಡ ಪುಸ್ತಕಗಳ ಓದುಗರ ಸಂಖ್ಯೆ ಬೆಳೆಯಬೇಕು.
೫. ಮಾಹಿತಿಯ ಕೊರತೆಯಿಂದಾಗಿ ಪುಸ್ತಕವೊಂದನ್ನು ಪಡೆಯಲಾಗದ ಸನ್ನಿವೇಶವನ್ನು ನಿವಾರಿಸಿಕೊಡುವ ಮೂಲಕ ಪುಸ್ತಕಪ್ರಿಯರಿಗೆ ಇದೊಂದು ನೆಚ್ಚಿನ ತಾಣವಾಗಬೇಕು.
೬. ನಡೆಯಲಿರುವ ಯಾವುದೇ ಪುಸ್ತಕ ಪ್ರಕಾಶನ, ಬಿಡುಗಡೆ, ಪ್ರದರ್ಶನ, ಮೇಳಗಳ ವಾರ್ತೆ ಇಲ್ಲಿ ಮುಂಚಿತವಾಗಿ ಸಿಗಬೇಕು.
೭. ರಾಜ್ಯದ ಎಲ್ಲ ಕನ್ನಡ ಪುಸ್ತಕ ಪ್ರಕಾಶಕರ ವಿಳಾಸ ಒಂದೇ ಕಡೆ ಸಿಗಬೇಕು.
ಮುಂದೆ.. ನನ್ನಿಂದ ಆಗದು-ನಮ್ಮಿಂದ ಆದೀತು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ